Jul 30, 2011


ಭಗವದ್ಗೀತೆ

ಭಗವದ್ಗೀತೆ
|ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ|
ಈ ಸಾಲನ್ನು ಕೇಳದವರು ಬಹುಶಃ ತುಂಬಾ ವಿರಳ. ಯಾವುದೇ ಭಾಷಣಗಳಲ್ಲಿಯೋ, ಪ್ರವಚನಗಳಲ್ಲೋ, ಆಗಾಗ್ಗೆ ನಾವಿದನ್ನು ಕೇಳುತ್ತಲೇ ಇರುತ್ತೇವೆ. ಇದರ ಸಂಕ್ಷಿಪ್ತ ವಾಚ್ಯಾರ್ಥವೆಂದರೆ 'ಪ್ರತಿಫಲಾಪೇಕ್ಷೆಯಿಲ್ಲದೆ ಕೆಲಸ ಮಾಡುತ್ತಾ ಇರು, ಒಳ್ಳೆಯದಾಗುತ್ತದೆ' ಅಂತ. 'ನಿರೀಕ್ಷೆ ಇಟ್ಟುಕೊಂಡು ಫಲ ದೊರೆಯದೇ ಹೋದಾಗ ಆಗುವ ಆಘಾತಕ್ಕಿಂತ ನಿರೀಕ್ಷೆ ಇಟ್ಟುಕೊಳ್ಳದೆಯೇ ಫಲ ದೊರೆತಾಗ ಆಗುವ ಆನಂದಕ್ಕೆ ಪಾರವಿಲ್ಲ. ಹೀಗಾಗಿ ನಿರೀಕ್ಷೆ ಬೇಡ' ಎಂಬುದು ಭಾವಾರ್ಥ.