ಇಂಟರ್ನೆಟ್ ಬಳಕೆ: ಚೀನಾ ನಂ.1, ಭಾರತ ನಂ.4
ಅತಿಹೆಚ್ಚು ಇಂಟರ್ನೆಟ್ ಬಳಕೆದಾರರನ್ನು ಹೊಂದಿರುವ ಟಾಪ್ 5 ದೇಶಗಳ ಪಟ್ಟಿ ಬಿಡುಗಡೆಗೊಂಡಿದೆ. ವಿಶ್ವದಲ್ಲಿ ಸುಮಾರು 1.8 ಬಿಲಿಯನ್ ಇಂಟರ್ನೆಟ್ ಬಳಕೆದಾರರಿದ್ದು ಅದರಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ.
1. ಚೀನಾ ಒಟ್ಟು 420 ಮಿಲಿಯನ್ ಇಂಟರ್ನೆಟ್ ಬಳಕೆದಾರರನ್ನು ಹೊಂದಿದ್ದು ಅಗ್ರಸ್ಥಾನದಲ್ಲಿದೆ. 1987 ರಲ್ಲಿ ಮೊದಲ ಇಂಟರ್ನೆಟ್ ಸಂಪರ್ಕ ಹೊಂದಿದ ಚೀನಾ "Across the Great Wall, We can reach every corner in the world"ಎಂಬ ಮೊಟ್ಟಮೊದಲ ಇಮೇಲ್ ಕಳಿಸಿತ್ತು.
2. 2005ರ ತನಕ ಅಗ್ರಸ್ಥಾನದಲ್ಲಿದ್ದ ಇಂಟರ್ನೆಟ್ ಜನಕ ಅಮೆರಿಕ ಎರಡನೇ ಸ್ಥಾನಕ್ಕೆ ದೂಡಲ್ಪಟ್ಟಿದೆ. 1960ರಲ್ಲಿ ಅಂತರ್ಜಾಲ ಸಂಪರ್ಕ ಸಾಧಿಸಿದರೂ, 1990ರಲ್ಲಿ ಸಾರ್ವಜನಿಕ ಇಂಟರ್ನೆಟ್ ಸೇವೆ ಆರಂಭಿಸಿತು. ಇತ್ತೀಚಿನ ಅಚ್ಚರಿಯ ಸಮೀಕ್ಷೆಯಂತೆ ಅಮೆರಿಕದಲ್ಲಿ ಪಾಸ್ ಪೋರ್ಟ್ ಉಳ್ಳವರಿಗಿಂತ ಫೇಸ್ ಬುಕ್ ಬಳಕೆದಾರರೇ ಹೆಚ್ಚಾಗಿದ್ದಾರೆ. ಅಮೆರಿಕದ ಒಟ್ಟು ಬಳಕೆದಾರರ ಸಂಖ್ಯೆ 239 ಮಿಲಿಯನ್ ಮುಟ್ಟಿದೆ.
3. ವೇಗಕ್ಕೆ ಹೆಚ್ಚಿನ ಪ್ರಾಧಾನ್ಯತೆ ಕೊಡುವ ಜಪಾನ್, ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಮಾಹಿತಿ ರವಾನೆ ಮಾಡುವ ಸಂಪರ್ಕಜಾಲವನ್ನು ಹೊಂದಿದೆ. ಆನ್ ಲೈನ್ ವಿಡಿಯೋ, ಟಿವಿ, ಚಾಟಿಂಗ್, ಮೀಟಿಂಗ್ ಮೂಲಕ ಎಲ್ಲೆಡೆ ಇಂಟರ್ನೆಟ್ ಆನ್ನು ಸಮರ್ಥವಾಗಿ ಬಳಸಲಾಗುತ್ತಿದೆ. 99 ಮಿಲಿಯನ್ ಗ್ರಾಹಕರನ್ನು ಹೊಂದಿರುವ ಜಪಾನ್ ಮೊಬೈಲ್ ಇಂಟರ್ನೆಟ್ ಕ್ಷೇತ್ರದಲ್ಲೂ ಅಗ್ರಸ್ಥಾನ ಕಾಯ್ದುಕೊಂಡಿದೆ.
4. ಭಾರತದಲ್ಲಿ ದಶಕದ ಕೆಳೆಗೆ ERNET ಮೂಲಕ ಆರಂಭವಾದ ಇಂಟರ್ನೆಟ್ ಶಕೆ ಶೈಕ್ಷಣಿಕ ಹಂತ ದಾಟಿ ಮನರಂಜನಾ ಮಾಧ್ಯಮವಾಗಿ ಹೆಚ್ಚಿಗೆ ಬಳಕೆಯಲ್ಲಿದೆ. 1995 ರಲ್ಲಿ ವಿದೇಶ್ ಸಂಚಾರ್ ನಿಗಮ್ ಲಿಮಿಟೆಡ್ ಗೇಟ್ ವೇ ಇಂಟರ್ನೆಟ್ ಸಂಪರ್ಕ ಆರಂಭಿಸಿತು. 1998ರ ನಂತರ ವಿಎಸ್ ನ್ನೆಲ್ ಏಕಸ್ವಾಮ್ಯತೆಗೆ ಮುಕ್ತಾಯ ಹಾಡಲಾಯಿತು. ಖಾಸಗಿ ಇಂಟರ್ನೆಟ್ ಸೇವಾದಾರರು ಮಾರುಕಟ್ಟೆಗಿಳಿದರು. ಭಾರತದಲ್ಲಿ ಒಟ್ಟು 81 ಮಿಲಿಯನ್ ಇಂಟರ್ನೆಟ್ ಬಳಕೆದಾರರಿದ್ದಾರೆ.
5. ಬ್ರೆಜಿಲ್ ಒಟ್ಟು 75 ಮಿಲಿಯನ್ ಬಳಕೆದಾರರೊಂದಿಗೆ ನಿಧಾನವಾಗಿ ಭಾರತಕ್ಕೆ ಪೈಪೋಟಿ ನೀಡುತ್ತಿದೆ. 1988ರಲ್ಲೇ ಮೊದಲ ಇಂಟರ್ನೆಟ್ ಸಂಪರ್ಕ ಪಡೆದರೂ, 1995ರಲ್ಲಿ ಸಾರ್ವಜನಿಕ ಸೇವೆ ಆರಂಭಿಸಲಾಯಿತು. ಸಾಮಾಜಿಕ ಜಾಲ ತಾಣಗಳ ಕ್ರಾಂತಿಯ ಫಲವಾಗಿ ಬ್ರೆಜಿಲ್ ನಲ್ಲಿ ನೆಟ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ.
No comments:
Post a Comment